ಬ್ರಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ ಹನುಮಂತ
ಹನುಮಂತನು ಧರಿಸಿರುವ ಜನಿವಾರವು ಬ್ರಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ. ಹನುಮಂತನಲ್ಲಿ ಬ್ರಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಷ್ಟ ಮಾಡುತ್ತಿದ್ದರು.
ಭೂತ, ರಾಕ್ಷಸ ಮುಂತಾದ ಕೆಟ್ಟ ಶಕ್ತಿಗಳಿಂದ ರಕ್ಷಣೆ
ಎಲ್ಲಾ ದೇವತಗಳಲ್ಲಿ ಕೇವಲ ಹನುಮಂತನಿಗೆ ಕೆಟ್ಟ ಶಕ್ತಿಗಳು ತೊಂದರೆ ನೀಡಲಾರವು. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರೂ ಅವರು ಹನುಮಂತನನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಹನುಮಂತನಿಗೆ ಭೂತಗಳ ನಾಯಕ ಎಂದು ಕರೆಯುತ್ತಾರೆ. ಯಾರಿಗಾದರು ಕೆಟ್ಟಶಕ್ತಿಗಳ ತೊಂದರೆಯಾದರೆ ಅವರು ಹನುಮಂತನ ಮಂದಿರಕ್ಕೆ ಹೋಗಿ ಹನುಮಾನ ಸ್ತೋತ್ರ ಪಠಣ ಮಾಡುತ್ತಾರೆ. ತೊಂದರೆ ಹೋಗದಿದ್ದರೆ ತೊಂದರೆ ಇರುವ ವ್ಯಕ್ತಿಗೆ ತೆಂಗಿನಕಾಯಿ ದೃಷ್ಟಿಯನ್ನು ತೆಗೆಯುತ್ತಾರೆ. ದೃಷ್ಟಿ ತೆಗೆಯುವಾಗ ಮನುಷ್ಯನಲ್ಲಿರುವ ಕೆಟ್ಟಶಕ್ತಿಗಳು ತೆಂಗಿನಕಾಯಿಯ ಒಳಗೆ ಬರುತ್ತದೆ. ಆ ತೆಂಗಿನಕಾಯಿಯನ್ನು ದೇವಸ್ಥಾನದಲ್ಲಿ ಒಡೆಯುವುದರಿಂದ ಹನುಮಂತನ ಶಕ್ತಿಯಿಂದ ಆ ಕೆಟ್ಟಶಕ್ತಿಯು ನಷ್ಟವಾಗುತ್ತದೆ ನಂತರ ಆ ತೆಂಗಿನಕಾಯಿಯನ್ನು ವಿಸರ್ಜಿಸಲಾಗುತ್ತದೆ.
ಯಾರದು ಮದುವೆ ಆಗಿರುವುದಿಲ್ಲವೋ ಅವರಲ್ಲಿ ಸಾಧಾರಣವಾಗಿ ೩೦ಶೇ. ಕಾರಣಗಳು ಕೆಟ್ಟಶಕ್ತಿಗಳ ತೊಂದರೆಯಿಂದಾಗಿ ಆಗುತ್ತದೆ. ಹನುಮಂತನ ಆರಾಧನೆಯಿಂದಾಗಿ ಎಲ್ಲಾ ತೊಂದರೆಗಳು ದೂರವಾಗುತ್ತದೆ ಮತ್ತು ಮದುವೆಯಾಗುತ್ತದೆ. (೧೦ಶೇ. ಮದುವೆಗಳು ಭಾವಿ ವಧು ಅಥವಾ ವರರು ಹೀಗಿರಬೇಕೆಂಬ ಅಪೇಕ್ಷೆಯಿಂದ ಆಗುತ್ತದೆ. ಈ ಅಪೇಕ್ಷೆಯು ಕಡಿಮೆ ಆದರೆ ಮದುವೆ ಆಗುತ್ತದೆ. ೫೦ಶೇ. ಪ್ರಾರಾಬ್ಧಕ್ಕನುಸಾರ ಮದುವೆ ಆಗುವುದಿಲ್ಲ. ಅದಕ್ಕಾಗಿ ಮಂದ, ಮಧ್ಯಮ ಪ್ರಾರಾಬ್ಧನುಸಾರ ಕುಲದೇವರ ಉಪಾಸನೆ ಇಂದ ಕಡಿಮೆ ಆಗುತ್ತದೆ. ತೀವ್ರ ಪ್ರಾರಾಬ್ಧ ಕೇವಲ ಸಂತ ಕೃಪೆ ಇಂದ ಕಡಿಮೆ ಆಗುತ್ತದೆ. ಉಳಿದ ೧೦ ಶೇ. ಇತರ ಕಾರಣಗಳಿಂದ ಆಗುವುದಿಲ್ಲ, ಅದಕ್ಕನುಸಾರ ಉಪಾಯ ಮಾಡಿದರೆ ಮದುವೆ ಆಗುತ್ತದೆ.)




























